ಕೋರಿ, ಕಾರ್ಲ್ ಫರ್ಡಿನಾಂಡ್
1896.  ಚೆಕ್-ಅಮೆರಿಕನ್ ಜೀವರಸಾಯನ ವಿಜ್ಞಾನಿ.  ಜನನ 1896ರ ಡಿಸೆಂಬರ್ 5ನೆಯ ತಾರೀಖು, ಪ್ರಾಗ್‍ನಲ್ಲಿ.  1920ರಲ್ಲಿ ಜರ್ಮನ್ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನು ಪಡೆದು ವಿಜ್ಞಾನ ವಿಷಯದಲ್ಲಿ ಹೆಚ್ಚಿನ ತರಬೇತಿಯನ್ನು ಯೂರೋಪು ದೇಶದಲ್ಲಿ ಪಡೆದುಕೊಂಡ.  ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಲಸೆ ಹೋಗಿ 1928ರಲ್ಲಿ ಆ ರಾಷ್ಟ್ರದ ಪೌರನಾದ.  ಹಾನಿಕಾರಕ ರೋಗಗಳ ಬಗ್ಗೆ ನ್ಯೂಯಾರ್ಕಿನ ಬಫೆಲೋದಲ್ಲಿ ಅಧ್ಯಯನ ನಡೆಸುವ ಶಾಲೆಯಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿ 9 ವರ್ಷ ಸೇವೆ ಸಲ್ಲಿಸಿದ.  1931ರಲ್ಲಿ ವಾಷಿಂಗ್‍ಟನ್ ವಿಶ್ವವಿದ್ಯಾಲಯದ ವೈದ್ಯವಿದ್ಯಾಲಯದ ಸೇಂಟ್ ಲೂಯಿಸ್‍ನಲ್ಲಿ ಔಷಧಶಾಸ್ತ ಮತ್ತು ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕನಾಗಿಯೂ 1947ರಲ್ಲಿ ಅದೇ ಸಂಸ್ಥೆಯ ಜೀವರಸಾಯನಶಾಸ್ತ್ರ ವಿಭಾಗಕ್ಕೆ ಅಧಕ್ಷನಾಗಿಯೂ ನೇಮಿಸಲ್ಪಟ್ಟ..  ಜೀವರಸಾಯನಶಾಸ್ತ್ರ ಮತ್ತು ವೈದ್ಯಕೀಯ ವಿಭಾಗದಲ್ಲಿ ಈತನೂ ಇವನ ಪತ್ನಿ ಗರ್ಟಿಕೋರಿಯೂ ನಡೆಸಿದ ಸಂಶೋಧನೆಗಳು ಅತ್ಯಂತ ಉಪಯುಕ್ತವಾದವು.
(ನೋಡಿ- ಕೋರಿ-ದಂಪತಿಗಳು)                           (ಎಚ್.ಆರ್.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ